- ರಕ್ಷೆ ಬೇಡುವುದು ಆರಾಧನೆಯಾಗಿದೆ. ಅಲ್ಲಾಹನಲ್ಲಿ, ಅವನ ಹೆಸರುಗಳಲ್ಲಿ ಮತ್ತು ಅವನ ಗುಣಲಕ್ಷಣಗಳಲ್ಲಿ ರಕ್ಷೆ ಬೇಡಬಹುದು.
- ಅಲ್ಲಾಹನ ವಚನಗಳಲ್ಲಿ ರಕ್ಷೆ ಬೇಡಬಹುದೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅಲ್ಲಾಹನ ವಚನವು ಅವನ ಗುಣಲಕ್ಷಣಗಳಲ್ಲಿ ಒಂದಾಗಿದೆ. ಆದರೆ ಸೃಷ್ಟಿಗಳಲ್ಲಿ ರಕ್ಷೆ ಬೇಡುವುದು ಇದಕ್ಕೆ ವಿರುದ್ಧವಾಗಿದ್ದು ಅದು ಬಹುದೇವಾರಾಧನೆಯಾಗಿದೆ.
- ಈ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅದರ ಸಮೃದ್ಧಿಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
- ದಿಕ್ರ್‌ಗಳನ್ನು ಪಠಿಸುವ ಮೂಲಕ ರಕ್ಷಣೆ ಪಡೆಯುವುದರಿಂದ ದಾಸನು ಕೆಡುಕುಗಳಿಂದ ಪಾರಾಗುತ್ತಾನೆ.
- ಜಿನ್ನ್‌ಗಳು, ಮಾಂತ್ರಿಕರು, ಮೋಸಗಾರರು ಮುಂತಾದ ಅಲ್ಲಾಹನ ಹೊರತಾದವರಲ್ಲಿ ರಕ್ಷೆ ಬೇಡುವುದು ಅಸಿಂಧುವಾಗಿಯೆಂದು ಈ ಹದೀಸ್ ತಿಳಿಸುತ್ತದೆ.
- ಊರಿನಲ್ಲಿ ಅಥವಾ ಪ್ರಯಾಣದಲ್ಲಿ ಯಾವುದೇ ಸ್ಥಳದಲ್ಲಿ ಇಳಿಯುವವರು ಈ ಪ್ರಾರ್ಥನೆಯನ್ನು ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ.