- ಶುದ್ಧೀಕರಣದಲ್ಲಿ ಎರಡು ವಿಧಗಳಿವೆ: ಒಂದು, ಬಾಹ್ಯ ಶುದ್ಧೀಕರಣ. ಇದು ವುದೂ (ಅಂಗಸ್ನಾನ) ಮತ್ತು ಸ್ನಾನದಿಂದ ಉಂಟಾಗುತ್ತದೆ. ಇನ್ನೊಂದು ಆಂತರಿಕ ಶುದ್ಧೀಕರಣ. ಇದು ಏಕದೇವ ವಿಶ್ವಾಸ, ಸತ್ಯವಿಶ್ವಾಸ ಮತ್ತು ಸತ್ಕರ್ಮಗಳಿಂದ ಉಂಟಾಗುತ್ತದೆ.
- ನಮಾಝನ್ನು ಸರಿಯಾಗಿ ನಿರ್ವಹಿಸಲು ಕಾಳಜಿ ವಹಿಸಬೇಕಾಗಿದೆ. ಏಕೆಂದರೆ ಅದು ಮನುಷ್ಯನಿಗೆ ಇಹಲೋಕದಲ್ಲಿ ಮತ್ತು ಪುನರುತ್ಥಾನ ದಿನದಲ್ಲಿ ಬೆಳಕಾಗಿ ಬರುತ್ತದೆ.
- ದಾನವು ಸತ್ಯವಿಶ್ವಾಸದ ಸತ್ಯತೆಗೆ ಪುರಾವೆಯಾಗಿದೆ.
- ಕುರ್‌ಆನ್ ನಮ್ಮ ಪರವಾಗಿ ಸಾಕ್ಷಿ ಹೇಳಲು ಮತ್ತು ನಮಗೆ ವಿರುದ್ಧವಾಗಿ ಸಾಕ್ಷಿ ಹೇಳದಿರಲು, ಅದರ ಪ್ರಕಾರ ನಡೆಯುವುದು ಮತ್ತು ಅದನ್ನು ಸತ್ಯವೆಂದು ನಂಬುವುದರ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ.
- ಆತ್ಮವನ್ನು ಅಲ್ಲಾಹನ ಆಜ್ಞಾಪಾಲನೆಯಲ್ಲಿ ತೊಡಗಿಸದಿದ್ದರೆ ಅದು ಪಾಪಗಳಲ್ಲಿ ನಿರತವಾಗುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
- ಪ್ರತಿಯೊಬ್ಬರೂ ಅನಿವಾರ್ಯವಾಗಿ ಕರ್ಮವೆಸಗುತ್ತಾರೆ. ಕೆಲವರು ಅಜ್ಞಾಪಾಲನೆಯ ಕರ್ಮಗಳನ್ನು ಮಾಡುವ ಮೂಲಕ ತಮ್ಮ ಆತ್ಮವನ್ನು ಸ್ವತಂತ್ರಗೊಳಿಸಿದರೆ, ಇನ್ನು ಕೆಲವರು ಆಜ್ಞೋಂಲ್ಲಂಘನೆ ಮಾಡುತ್ತಾ ತಮ್ಮ ಆತ್ಮವನ್ನು ನಾಶಗೊಳಿಸುತ್ತಾರೆ.
- ತಾಳ್ಮೆಯಿಂದಿರಲು ನಿರಂತರ ಪರಿಶ್ರಮಿಸಬೇಕಾದುದು ಮತ್ತು ಅಲ್ಲಾಹನ ಪ್ರತಿಫಲವನ್ನು ನಿರೀಕ್ಷಿಸಬೇಕಾದುದು ಅತ್ಯಗತ್ಯ. ಇದು ಬಹಳ ಪ್ರಯಾಸಕರ ಸಂಗತಿಯಾಗಿದೆ.