- ಅಲ್ಲಾಹನನ್ನು ಸ್ಮರಿಸಲು ಚಿಕ್ಕ ಅಶುದ್ಧಿ ಅಥವಾ ದೊಡ್ಡ ಅಶುದ್ಧಿಯಿಂದ ಶುದ್ದಿಯಾಗಬೇಕೆಂಬ ಷರತ್ತು ಇಲ್ಲವೆಂದು ಈ ಹದೀಸ್ ತಿಳಿಸುತ್ತದೆ.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸದಾ ಅಲ್ಲಾಹನನ್ನು ಸ್ಮರಿಸುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಿ ಎಲ್ಲಾ ಸ್ಥಿತಿಗಳನ್ನೂ ಅಲ್ಲಾಹನನ್ನು ಸ್ಮರಿಸುವುದನ್ನು ಹೆಚ್ಚಿಸಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಆದರೆ ಮಲಮೂತ್ರ ವಿಸರ್ಜನೆ ಮುಂತಾದ ಅಲ್ಲಾಹನನ್ನು ಸ್ಮರಿಸಬಾರದ ಸ್ಥಿತಿಗಳ ಹೊರತು.