- ಪ್ರಾರ್ಥನೆಯು ಆರಾಧನೆಯ ಮೂಲವಾಗಿದ್ದು ಅದನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸಬಾರದು ಎಂದು ಈ ಹದೀಸ್ ತಿಳಿಸುತ್ತದೆ.
- ಪ್ರಾರ್ಥನೆಯು ವಸ್ತುನಿಷ್ಠ ದಾಸ್ಯತ್ವವನ್ನು ಮತ್ತು ಅಲ್ಲಾಹನ ನಿರಪೇಕ್ಷತೆ ಮತ್ತು ಸಾಮರ್ಥ್ಯವನ್ನು ಒಪ್ಪಿಕೊಳ್ಳುವುದನ್ನು ಒಳಗೊಳ್ಳುತ್ತದೆ.
- ಅಲ್ಲಾಹನನ್ನು ಆರಾಧಿಸಲು ಅಹಂಕಾರಪಡುವವರಿಗೆ ಮತ್ತು ಅವನಲ್ಲಿ ಪ್ರಾರ್ಥಿಸುವುದನ್ನು ಬಿಟ್ಟುಬಿಡುವವರಿಗೆ ಈ ಹದೀಸಿನಲ್ಲಿ ಉಗ್ರ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲಾಹನಲ್ಲಿ ಪ್ರಾರ್ಥಿಸಲು ಅಹಂಕಾರ ಪಡುವವರು ನಿಂದನೀಯ ಮತ್ತು ಅಪಮಾನಕರ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುತ್ತಾರೆಂದು ಈ ಹದೀಸಿನಲ್ಲಿ ಹೇಳಲಾಗಿದೆ.