- ಮನೆಗಳಲ್ಲಿ ಆರಾಧನೆಗಳನ್ನು ಮತ್ತು ಐಚ್ಛಿಕ ನಮಾಝ್‌ಗಳನ್ನು ಹೆಚ್ಚಿಸಲು ಈ ಹದೀಸಿನಲ್ಲಿ ಪ್ರೋತ್ಸಾಹವಿದೆ.
- ಸಮಾಧಿಸ್ಥಳದಲ್ಲಿ ನಮಾಝ್ ಮಾಡಬಾರದು. ಏಕೆಂದರೆ ಅದು ಶಿರ್ಕ್ (ಬಹುದೇವಾರಾಧನೆ)ಗೆ ಮತ್ತು ಸಮಾಧಿಗಳಲ್ಲಿರುವ ವ್ಯಕ್ತಿಗಳ ವಿಷಯದಲ್ಲಿ ಹದ್ದು ಮೀರುವುದಕ್ಕೆ ಕಾರಣವಾಗುತ್ತದೆ. ಆದರೆ ಅಂತ್ಯಕ್ರಿಯೆಯ (ಜನಾಝ) ನಮಾಝನ್ನು ಇದರಿಂದ ಹೊರತುಪಡಿಸಲಾಗಿದೆ.
- ಸಮಾಧಿಗಳ ಬಳಿ ನಮಾಝ್ ಮಾಡಬಾರದೆಂಬ ವಿರೋಧವು ಸಹಾಬಿಗಳ ನಡುವೆ ಅಂಗೀಕೃತವಾಗಿತ್ತೆಂದು ಈ ಹದೀಸಿನಿಂದ ತಿಳಿಯುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿ ನಮಾಝ್ ನಿರ್ವಹಿಸದಿದ್ದರೆ ಅದು ಸಮಾಧಿ ಸ್ಥಳವಾಗುತ್ತದೆಯೆಂದು ಹೇಳಿದರು. ಏಕೆಂದರೆ ಸಮಾಧಿಗಳ ಬಳಿ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.