/ ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ...

ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ...

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ."
متفق عليه

ವಿವರಣೆ

ಕುರ್‌ಆನಿನ ಬಗ್ಗೆ ನಿಗಾ ವಹಿಸಬೇಕೆಂದು ಮತ್ತು ಅದನ್ನು ಕಂಠಪಾಠ ಮಾಡಿದ ನಂತರ ಅದು ಮರೆತು ಹೋಗದಿರಲು ಅದನ್ನು ನಿರಂತರ ಪಠಿಸುತ್ತಿರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ನಂತರ ತಮ್ಮ ಮಾತಿಗೆ ಒತ್ತು ಕೊಡುತ್ತಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮೇಲೆ ಆಣೆಮಾಡಿ ಹೇಳುವುದೇನೆಂದರೆ, ತಮ್ಮ ಮುಂಗಾಲಿನ ಮಧ್ಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗಿರುವ ಒಂಟೆಗಳು ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಪವಿತ್ರ ಕುರ್‌ಆನ್ ಸ್ಮೃತಿ ಪಟಲದಿಂದ ಮಾಸಿ ಹೋಗುತ್ತದೆ. ಮನುಷ್ಯನು ಅದರ ಬಗ್ಗೆ ನಿಗಾ ವಹಿಸಿದರೆ, ಅದು ಅವನೊಂದಿಗೆ ಇರುತ್ತದೆ. ಆದರೆ, ಅವನು ಅದನ್ನು ನಿರ್ಲಕ್ಷಿಸಿದರೆ, ಅದು ಹೊರಟು ಹೋಗುತ್ತದೆ ಮತ್ತು ಕಳೆದು ಹೋಗುತ್ತದೆ.

Hadeeth benefits

  1. ಕುರ್‌ಆನ್ ಕಂಠಪಾಠ ಮಾಡಿದವರು ಅದನ್ನು ನಿಯಮಿತವಾಗಿ ಪದೇ ಪದೇ ಪಟಿಸುತ್ತಿದ್ದರೆ ಅದು ಅವರ ಹೃದಯದಲ್ಲಿ ಸುರಕ್ಷಿತವಾಗಿ ಉಳಿಯುತ್ತದೆ. ಇಲ್ಲದಿದ್ದರೆ ಅದು ಹೊರಟು ಹೋಗುತ್ತದೆ ಮತ್ತು ಅವರು ಅದನ್ನು ಮರೆಯುತ್ತಾರೆ.
  2. ಕುರ್‌ಆನಿನ ಬಗ್ಗೆ ನಿಗಾ ವಹಿಸಿದರೆ ಪುನರುತ್ಥಾನ ದಿನದಂದು ಅಗಾಧ ಪ್ರತಿಫಲಗಳು ಮತ್ತು ಉನ್ನತ ಸ್ಥಾನಮಾನಗಳು ಸಿಗುತ್ತವೆ.