/ ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ...

ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."
رواه أبو داود والترمذي والنسائي في الكبرى وأحمد

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕುರ್‌ಆನ್ ಪಠಿಸುವವನು, ಅದರ ಪ್ರಕಾರ ಜೀವನ ನಡೆಸಿದವನು ಮತ್ತು ಸದಾ ಕುರ್‌ಆನ್ ಪಠಿಸುತ್ತಾ ಕಂಠಪಾಠ ಮಾಡುತ್ತಾ ಇದ್ದವನೊಂದಿಗೆ ಅವನು ಸ್ವರ್ಗವನ್ನು ಪ್ರವೇಶಿಸಿದಾಗ ಹೀಗೆ ಹೇಳಲಾಗುವುದು: "ನೀನು ಕುರ್‌ಆನ್ ಪಠಿಸು ಮತ್ತು ಅದರ ಮೂಲಕ ಸ್ವರ್ಗದ ಪದವಿಗಳಿಗೆ ಏರುತ್ತಾ ಹೋಗು. ಇಹಲೋಕದಲ್ಲಿ ಶಾಂತವಾಗಿ ಮತ್ತು ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."

Hadeeth benefits

  1. ಕರ್ಮಗಳ ಪ್ರಮಾಣ ಮತ್ತು ವಿಧಾನದ ಆಧಾರದಲ್ಲಿ ಪ್ರತಿಫಲವನ್ನು ನೀಡಲಾಗುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
  2. ಕುರ್‌ಆನನ್ನು ಪಠಿಸುವುದು, ಅದನ್ನು ಕಲಿಯುವುದು, ಕಂಠಪಾಠ ಮಾಡುವುದು, ಅದರಲ್ಲಿರುವ ದೃಷ್ಟಾಂತಗಳ ಬಗ್ಗೆ ಆಲೋಚಿಸುವುದು ಮತ್ತು ಅದರ ಪ್ರಕಾರ ಜೀವನ ನಡೆಸುವುದನ್ನು ಈ ಹದೀಸ್ ಪ್ರೋತ್ಸಾಹಿಸುತ್ತದೆ.
  3. ಸ್ವರ್ಗದಲ್ಲಿ ಅನೇಕ ಪದವಿಗಳು ಮತ್ತು ಸ್ಥಾನಮಾನಗಳಿವೆ ಎಂದು ಈ ಹದೀಸ್ ತಿಳಿಸುತ್ತದೆ. ಕುರ್‌ಆನ್ ಪಠಿಸುವವರಿಗೆ ಸ್ವರ್ಗದಲ್ಲಿ ಉನ್ನತ ಪದವಿಗಳಿವೆ.