- ಕುರ್‌ಆನ್ ಪಠಣವನ್ನು ಹೆಚ್ಚಿಸಲು ಈ ಹದೀಸ್ ಒತ್ತಾಯಿಸುತ್ತದೆ.
- ಕುರ್‌ಆನ್ ಪಠಣ ಮಾಡುವವರಿಗೆ ಅವರು ಪಠಿಸುವ ಪ್ರತಿಯೊಂದು ಶಬ್ದದ ಪ್ರತಿಯೊಂದು ಅಕ್ಷರಕ್ಕೂ ಹತ್ತು ಪಟ್ಟು ಒಳಿತುಗಳನ್ನು ಮಾಡಿದ ಪ್ರತಿಫಲವಿದೆ.
- ಅಲ್ಲಾಹನ ದಯೆ ಮತ್ತು ಉದಾರತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ. ಏಕೆಂದರೆ, ಅವನು ತನ್ನ ಔದಾರ್ಯ ಮತ್ತು ಅನುಗ್ರಹದಿಂದ ದಾಸರಿಗೆ ಹೆಚ್ಚು ಹೆಚ್ಚು ಪ್ರತಿಫಲ ನೀಡುತ್ತಾನೆ.
- ಇತರ ವಚನಗಳಿಗಿಂತಲೂ ಕುರ್‌ಆನ್ ವಚನಗಳಿಗೆ ಶ್ರೇಷ್ಠತೆಯಿದೆಯೆಂದು ಮತ್ತು ಅದನ್ನು ಪಠಿಸುವುದು ಆರಾಧನೆಯಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಅಲ್ಲಾಹನ ವಚನವಾಗಿದೆ.