- ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಶ್ರೇಷ್ಠತೆಯನ್ನು ಮತ್ತು ಕುರ್‌ಆನ್ ಕಲಿಯಲು ಅವರಿಗಿದ್ದ ಉತ್ಸಾಹವನ್ನು ಈ ಹದೀಸ್ ವಿವರಿಸುತ್ತದೆ.
- ಜ್ಞಾನ ಮತ್ತು ಅದರ ಆಧಾರದಲ್ಲಿ ಕರ್ಮಗಳನ್ನು ಮಾಡುವುದರ ಮೂಲಕ ಕುರ್‌ಆನ್ ಕಲಿಯಬೇಕಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಇದಲ್ಲದೆ ಕುರ್‌ಆನ್ ಕಲಿಯುವುದು ಎಂದರೆ ಕೇವಲ ಪಠಿಸುವುದು ಮತ್ತು ಕಂಠಪಾಠ ಮಾಡುವುದಲ್ಲ.
- ಮಾತನಾಡುವುದಕ್ಕೆ ಮತ್ತು ಕರ್ಮವೆಸಗುವುದಕ್ಕೆ ಮುಂಚಿತವಾಗಿ ಅದರ ಜ್ಞಾನವನ್ನು ಹೊಂದಿರಬೇಕೆಂದು ಈ ಹದೀಸ್ ತಿಳಿಸುತ್ತದೆ.