- ಪವಿತ್ರ ಕುರ್‌ಆನಿನ ಶ್ರೇಷ್ಠತೆಯನ್ನು ಮತ್ತು ಅದು ವಚನಗಳಲ್ಲೇ ಅತಿ ಶ್ರೇಷ್ಠವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಅಲ್ಲಾಹನ ವಚನಗಳಾಗಿವೆ.
- ನಿಜವಾದ ಜ್ಞಾನಾರ್ಥಿಗಳು ಎಂದರೆ ತಾವು ಕಲಿತದ್ದನ್ನು ಇತರರಿಗೆ ಕಲಿಸಿಕೊಡುವವರೇ ವಿನಾ ತಾವು ಮಾತ್ರ ಕಲಿಯುವವರಲ್ಲ.
- ಕುರ್‌ಆನ್ ಅನ್ನು ಕಲಿಯುವುದು ಮತ್ತು ಅದನ್ನು ಕಲಿಸುವುದರಲ್ಲಿ ಅದರ ಪಠಣವನ್ನು, ಅರ್ಥ ಮತ್ತು ನಿಯಮಗಳನ್ನು ಕಲಿಯುವುದು ಮತ್ತು ಕಲಿಸುವುದು ಒಳಪಡುತ್ತದೆ.