- ಧಾರ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಮತ್ತು ಅದನ್ನು ಕಲಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ ಮತ್ತು ಅದಕ್ಕಾಗಿ ಪ್ರೋತ್ಸಾಹಿಸುತ್ತದೆ.
- ಸತ್ಯಕ್ಕೆ ಬದ್ಧರಾಗಿರುವ ಒಂದು ಗುಂಪು ಈ ಸಮುದಾಯದಲ್ಲಿ ಇದ್ದೇ ಇರುತ್ತದೆ. ಒಂದು ಗುಂಪು ಅದನ್ನು ತ್ಯಜಿಸಿದರೆ, ಇನ್ನೊಂದು ಗುಂಪು ಅದನ್ನು ಅನುಸರಿಸುತ್ತದೆ.
- ಧರ್ಮವನ್ನು ಅರ್ಥಮಾಡಿಕೊಳ್ಳುವುದು ಅಲ್ಲಾಹು ತನ್ನ ದಾಸರಿಗೆ ಒಳಿತನ್ನು ಉದ್ದೇಶಿಸಿದ್ದಾನೆ ಎಂಬುದರ ದ್ಯೋತಕವಾಗಿದೆ.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಆಜ್ಞೆ ಮತ್ತು ಇಚ್ಛೆಯ ಪ್ರಕಾರವೇ ನೀಡುತ್ತಾರೆ ಮತ್ತು ಯಾವುದು ಕೂಡ ಅವರ ಒಡೆತನದಲ್ಲಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.