- ಅಲ್ಲಾಹನಿಗೆ ತನ್ನ ಸತ್ಯವಿಶ್ವಾಸಿ ದಾಸರ ಮೇಲಿರುವ ಕರುಣೆಯಿಂದಾಗಿ ಅವನು ಇಹಲೋಕದ ಸಂಕಷ್ಟ ಮತ್ತು ವಿಪತ್ತುಗಳ ಮೂಲಕ ಅವರು ಮಾಡಿದ ಪಾಪಗಳನ್ನು ಅಳಿಸುತ್ತಾನೆ.
- ಸತ್ಯವಿಶ್ವಾಸವಿದ್ದರೆ ಕೇವಲ ಪರೀಕ್ಷೆಗಳಿಂದ ಪಾಪಗಳು ನಿವಾರಣೆಯಾಗುತ್ತವೆ. ಇನ್ನು ದಾಸನು ಕೋಪಗೊಳ್ಳದೆ ಪರೀಕ್ಷೆಗಳನ್ನು ತಾಳ್ಮೆಯಿಂದ ಸ್ವೀಕರಿಸಿದರೆ ಅವನಿಗೆ ಅದಕ್ಕಾಗಿ ಪ್ರತಿಫಲ ಕೂಡ ದೊರೆಯುತ್ತದೆ.
- ಇಷ್ಟವಿರುವ ಮತ್ತು ಇಷ್ಟವಿಲ್ಲದ ಎಲ್ಲಾ ವಿಷಯಗಳಲ್ಲೂ ತಾಳ್ಮೆಯಿಂದಿರಲು ಪ್ರೋತ್ಸಾಹಿಸಲಾಗಿದೆ. ಅಲ್ಲಾಹು ಕಡ್ಡಾಯಗೊಳಿಸಿದ್ದನ್ನು ನಿರ್ವಹಿಸಲು ತಾಳ್ಮೆ ವಹಿಸಬೇಕಾಗಿದೆ. ಹಾಗೆಯೇ ಅವನು ನಿಷೇಧಿಸಿದ್ದನ್ನು ತೊರೆಯಲು ಕೂಡ ತಾಳ್ಮೆ ವಹಿಸಬೇಕಾಗಿದೆ. ತಾಳ್ಮೆಯ ಸಂದರ್ಭದಲ್ಲಿ ಅಲ್ಲಾಹನ ಪ್ರತಿಫಲವನ್ನು ನಿರೀಕ್ಷಿಸಬೇಕು ಮತ್ತು ಅವನ ಶಿಕ್ಷೆಯನ್ನು ಭಯಪಡಬೇಕು.
- "ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಗಳು" ಎಂದು ಹೇಳುವಾಗ "ಸತ್ಯವಿಶ್ವಾಸಿನಿಗಳು" ಎಂಬ ಪದವನ್ನು ಸೇರಿಸಲಾಗಿದೆ. ಇದು ಈ ವಿಷಯದಲ್ಲಿ ಮಹಿಳೆಯರಿಗೆ ಒತ್ತು ಕೊಡಲಾಗಿದೆ ಎಂಬುದನ್ನು ಸೂಚಿಸುತ್ತದೆ. ವಾಸ್ತವವಾಗಿ, "ಸತ್ಯವಿಶ್ವಾಸಿ" ಎಂದು ಹೇಳುವಾಗ ಅದರಲ್ಲಿ ಮಹಿಳೆಯರು ಕೂಡ ಒಳಪಡುತ್ತಾರೆ. ಈ ಪದವು ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರಿಗೆ ಪರೀಕ್ಷೆಗಳು ಸಂಭವಿಸಿದರೆ, ಅವರ ಪಾಪಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ ಎಂದು ಅವರಿಗೂ ವಾಗ್ದಾನ ಮಾಡಲಾಗಿದೆ.
- ಪರೀಕ್ಷೆಗಳಿಗಿರುವ ಶ್ರೇಷ್ಠ ಪ್ರತಿಫಲವನ್ನು ತಿಳಿದರೆ, ಪದೇ ಪದೇ ನೋವುಗಳನ್ನು ಅನುಭವಿಸುವುದು ಮನುಷ್ಯನಿಗೆ ಕಷ್ಟವಾಗುವುದಿಲ್ಲ.