/ ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ

ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ."
رواه البخاري

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ಸತ್ಯವಿಶ್ವಾಸಿ ದಾಸರಲ್ಲಿ ಯಾರಿಗಾದರೂ ಒಳಿತನ್ನು ಬಯಸಿದರೆ, ಅವರನ್ನು ಅವರ ದೇಹದಲ್ಲಿ, ಆಸ್ತಿಯಲ್ಲಿ ಅಥವಾ ಕುಟುಂಬದಲ್ಲಿ ಪರೀಕ್ಷಿಸುತ್ತಾನೆ. ಈ ಪರೀಕ್ಷೆಗಳು ಸತ್ಯವಿಶ್ವಾಸಿಯು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ ಅವನ ಕಡೆಗೆ ಮರಳಲು, ಅವನ ಪಾಪಗಳು ಪರಿಹಾರವಾಗಲು ಮತ್ತು ಅವನ ಪದವಿಗಳು ಉನ್ನತವಾಗಲು ಕಾರಣವಾಗುತ್ತವೆ.

Hadeeth benefits

  1. ಸತ್ಯವಿಶ್ವಾಸಿಯು ಅನೇಕ ವಿಧಗಳ ಪರೀಕ್ಷೆಗಳಿಗೆ ಗುರಿಯಾಗುತ್ತಾನೆಂದು ಈ ಹದೀಸ್ ತಿಳಿಸುತ್ತದೆ.
  2. ಕೆಲವೊಮ್ಮೆ ಪರೀಕ್ಷೆಗಳು ದಾಸನ ಮೇಲೆ ಅಲ್ಲಾಹನಿಗಿರುವ ಪ್ರೀತಿಯ ಸಂಕೇತವಾಗಿದ್ದು, ಅವನು ದಾಸನ ಪದವಿಯನ್ನು ಏರಿಸಲು, ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ಅವನ ಪಾಪಗಳನ್ನು ಅಳಿಸಲು ಕಾರಣವಾಗಬಹುದು.
  3. ಸಂಕಷ್ಟಗಳು ಎದುರಾಗುವಾಗ ತಾಳ್ಮೆಯಿಂದಿರಬೇಕು ಮತ್ತು ತಾಳ್ಮೆಗೆಡಬಾರದೆಂದು ಈ ಹದೀಸ್ ಪ್ರೇರೇಪಿಸುತ್ತದೆ.