- ಸೀನುವ ವಿಷಯದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾದರಿ ಹೇಗಿತ್ತೆಂದು ಮತ್ತು ಅದನ್ನು ಅನುಸರಿಸುವ ವಿಧಾನವನ್ನು ವಿವರಿಸಲಾಗಿದೆ.
- ಸೀನುವಾಗ ಬಾಯಿಯಿಂದ ಏನಾದರೂ ಹೊರಬಂದು ಹತ್ತಿರದಲ್ಲಿರುವವರಿಗೆ ತೊಂದರೆಯಾಗದಿರಲು ಬಟ್ಟೆ, ಕರವಸ್ತ್ರ ಮುಂತಾದವುಗಳನ್ನು ಬಾಯಿ ಮತ್ತು ಮೂಗಿನ ಮೇಲಿಡುವುದು ಅಪೇಕ್ಷಣೀಯವಾಗಿದೆ.
- ಸೀನುವಾಗ ಶಬ್ದವನ್ನು ತಗ್ಗಿಸುವುದು ಅತ್ಯಾವಶ್ಯವಾಗಿದೆ. ಇದು ಶಿಷ್ಟಾಚಾರದ ಸಂಪೂರ್ಣತೆ ಮತ್ತು ಉತ್ತಮ ನಡವಳಿಕೆಯಾಗಿದೆ.