/ ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ...

ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ...

ಸಹಲ್ ಬಿನ್ ಮುಆದ್ ಬಿನ್ ಅನಸ್ ತಮ್ಮ ತಂದೆಯಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಆಹಾರ ಸೇವಿಸಿದ ನಂತರ, “ಅಲ್-ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನೀ ಹಾದಾ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ.” (ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಆಹಾರವನ್ನು ಉಣಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ) ಎಂದು ಹೇಳುತ್ತಾನೋ, ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು."
رواه أبو داود والترمذي وابن ماجه وأحمد

ವಿವರಣೆ

ಆಹಾರ ಸೇವಿಸಿದವನು ಅಲ್ಲಾಹನನ್ನು ಸ್ತುತಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಏಕೆಂದರೆ,ಅಲ್ಲಾಹನ ಮೂಲಕ ಮತ್ತು ಅವನ ಸಹಾಯದ ಮೂಲಕವಲ್ಲದೆ ಆಹಾರವನ್ನು ತರಿಸಲು ಯಾರಿಗೂ ಸಾಧ್ಯವಿಲ್ಲ. ನಂತರ, ಇದನ್ನು ಹೇಳಿದವನು ತಾನು ಈಗಾಗಲೇ ಮಾಡಿಟ್ಟ ಸಣ್ಣ ಪಾಪಗಳನ್ನು ಅಲ್ಲಾಹು ಕ್ಷಮಿಸುವ ಅರ್ಹತೆಯನ್ನು ಹೊಂದುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಭಸುದ್ದಿಯನ್ನು ನೀಡಿದ್ದಾರೆ.

Hadeeth benefits

  1. ಆಹಾರ ಸೇವಿಸಿದ ನಂತರ ಅಲ್ಲಾಹನನ್ನು ಸ್ತುತಿಸುವುದು ಅಪೇಕ್ಷಣೀಯವಾಗಿದೆ.
  2. ಅಲ್ಲಾಹನಿಗೆ ದಾಸರ ಮೇಲಿರುವ ಮಹಾ ಔದಾರ್ಯವನ್ನು ತಿಳಿಸಲಾಗಿದೆ. ಏಕೆಂದರೆ, ಅವನು ಅವರಿಗೆ ಜೀವನೋಪಾಯವನ್ನು ಒದಗಿಸುತ್ತಾನೆ, ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುತ್ತಾನೆ ಮತ್ತು ಅದರಲ್ಲಿ ಅವರ ಪಾಪಗಳಿಗೆ ಪರಿಹಾರವನ್ನೂ ಇಟ್ಟಿದ್ದಾನೆ.
  3. ಮನುಷ್ಯರಿಗೆ ಸಂಬಂಧಿಸಿದ ಎಲ್ಲವೂ ಅಲ್ಲಾಹನಿಂದಲೇ ಆಗಿದೆ. ಅದು ಅವರ ಶಕ್ತಿ ಅಥವಾ ಸಾಮರ್ಥ್ಯದಿಂದಲ್ಲ. ಕಾರ್ಯಕಾರಣಗಳನ್ನು ಅವಲಂಬಿಸಲು ಮನುಷ್ಯರಿಗೆ ಆಜ್ಞಾಪಿಸಲಾಗಿದೆ.