- ಭೌತಿಕ ಹಿತಾಸಕ್ತಿಯಿಲ್ಲದೆ, ಕೇವಲ ಅಲ್ಲಾಹನಿಗಾಗಿ ಮಾತ್ರ ಪ್ರೀತಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
- ಒಬ್ಬ ವ್ಯಕ್ತಿ ಅಲ್ಲಾಹನಿಗಾಗಿ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ, ಅದನ್ನು ಅವನಿಗೆ ತಿಳಿಸುವುದು ಅಪೇಕ್ಷಣೀಯವಾಗಿದೆ. ಇದರಿಂದ ಅವರ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆಯು ಹೆಚ್ಚುತ್ತದೆ.
- ಸತ್ಯವಿಶ್ವಾಸಿಗಳ ನಡುವೆ ಪ್ರೀತಿ ಹರಡುವುದರಿಂದ ಸತ್ಯವಿಶ್ವಾಸದ ಆಧಾರದಲ್ಲಿರುವ ಸಹೋದರತೆಯು ಪ್ರಬಲವಾಗುವುದು ಮಾತ್ರವಲ್ಲದೆ, ಮುಸ್ಲಿಂ ಸಮಾಜದಲ್ಲಿ ಒಡಕು ಹಾಗೂ ಭಿನ್ನಮತಗಳು ನಿವಾರಣೆಯಾಗುತ್ತವೆ.