- ಶಿರ್ಕ್‌ಗೆ ಕಾರಣವಾಗುವ ಎಲ್ಲಾ ಮಾರ್ಗಗಳನ್ನು ತಡೆಗಟ್ಟುವ ಉದ್ದೇಶದಿಂದ, ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದು, ಸಮಾಧಿಗಳ ಬಳಿ ನಮಾಝ್ ಮಾಡುವುದು ಅಥವಾ ಮೃತದೇಹಗಳನ್ನು ಮಸೀದಿಗಳಲ್ಲಿ ದಫನ ಮಾಡುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
- ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದು ಮತ್ತು ಅವುಗಳಲ್ಲಿ ಚಿತ್ರಗಳನ್ನು ಸ್ಥಾಪಿಸುವುದು ಯಹೂದಿಗಳು ಮತ್ತು ಕ್ರೈಸ್ತರ ಆಚರಣೆಯಾಗಿದೆ. ಅದನ್ನು ಮಾಡುವವರು ಅವರನ್ನು ಅನುಕರಿಸುತ್ತಿದ್ದಾರೆ.
- ಜೀವಂತ ವಸ್ತುಗಳ ಚಿತ್ರಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
- ಸಮಾಧಿಯ ಮೇಲೆ ಮಸೀದಿಯನ್ನು ನಿರ್ಮಿಸಿ, ಅದರಲ್ಲಿ ಚಿತ್ರಗಳನ್ನು ರಚಿಸುವವನು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟನಾಗಿದ್ದಾನೆ.
- ಶಿರ್ಕ್‌ಗೆ ಕಾರಣವಾಗಬಹುದಾದ ಎಲ್ಲಾ ಮಾರ್ಗಗಳನ್ನು ಮುಚ್ಚುವ ಮೂಲಕ ಇಸ್ಲಾಮಿ ಶರಿಯತ್ (ಧರ್ಮಶಾಸ್ತ್ರ) ತೌಹೀದ್ (ಏಕದೇವವಿಶ್ವಾಸ) ಗೆ ಸಂಪೂರ್ಣ ರಕ್ಷಣೆ ನೀಡಿದೆ.
- ಮಹಾಪುರುಷರ ವಿಷಯದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಶಿರ್ಕ್‌ಗೆ ಕಾರಣವಾಗುತ್ತದೆ.