- ಈ ಹದೀಸಿನಲ್ಲಿ ಕೋಪ ಮತ್ತು ಅದರ ಕಾರಣಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅದು ಎಲ್ಲಾ ಕೆಡುಕುಗಳನ್ನೂ ಒಳಗೊಂಡಿದೆ. ಅದರಿಂದ ದೂರವಿರುವುದು ಎಲ್ಲಾ ರೀತಿಯ ಒಳಿತುಗಳಿಗೆ ಕಾರಣವಾಗುತ್ತದೆ.
- ಅಲ್ಲಾಹು ನಿಷೇಧಿಸಿದ ಕಾರ್ಯಗಳನ್ನು ಯಾರಾದರೂ ಮಾಡುವಾಗ ಕೋಪಗೊಳ್ಳುವುದು ಪ್ರಶಂಸನೀಯವಾಗಿದೆ.
- ಕೇಳುಗನು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳಲು ಅಗತ್ಯ ಸಂದರ್ಭಗಳಲ್ಲಿ ಅದನ್ನು ಪುನರಾವರ್ತಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
- ವಿದ್ವಾಂಸರಿಂದ ಹಿತವಚನ ಪಡೆಯುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.