ಒಳ್ಳೆಯ ಒಡನಾಡಿ ಮತ್ತು ಕೆಟ್ಟ ಒಡನಾಡಿಯ ಉದಾಹರಣೆಯು ಕಸ್ತೂರಿ ಮಾರುವವನ ಮತ್ತು ತಿದಿ ಊದುವವನಂತೆ
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಳ್ಳೆಯ ಒಡನಾಡಿ ಮತ್ತು ಕೆಟ್ಟ ಒಡನಾಡಿಯ ಉದಾಹರಣೆಯು ಕಸ್ತೂರಿ ಮಾರುವವನ ಮತ್ತು ತಿದಿ ಊದುವವನಂತೆ. ಕಸ್ತೂರಿ ಮಾರುವವನು ನಿನಗೆ ಸ್ವಲ್ಪ ಕಸ್ತೂರಿಯನ್ನು ಕೊಡಬಹುದು. ಅಥವಾ ನೀನು ಅವನಿಂದ ಅದನ್ನು ಖರೀದಿಸಬಹುದು. ಅಥವಾ ನಿನಗೆ ಅವನಿಂದ ಉತ್ತಮ ಸುವಾಸನೆಯನ್ನು ಅನುಭವಿಸಬಹುದು. ಆದರೆ ತಿದಿ ಊದುವವನು ನಿನ್ನ ಬಟ್ಟೆಯನ್ನು ಸುಟ್ಟು ಹಾಕಬಹುದು. ಅಥವಾ ನಿನಗೆ ಅವನಿಂದ ಕೆಟ್ಟ ವಾಸನೆಯನ್ನು ಅನುಭವಿಸಬೇಕಾಗಬಹುದು."
متفق عليه
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ತರಹದ ಜನರಿಗೆ ಉದಾಹರಣೆ ನೀಡಿದ್ದಾರೆ.
ಮೊದಲನೆಯವನು: ದೇವನಿಷ್ಠೆಯಿರುವ ಒಡನಾಡಿ ಅಥವಾ ಮಿತ್ರ. ಈತ ಅಲ್ಲಾಹನ ಕಡೆಗೆ ಮತ್ತು ಅವನು ಇಷ್ಟಪಡುವ ವಿಷಯಗಳ ಕಡೆಗೆ ಸಾಗಿಸುತ್ತಾನೆ ಹಾಗೂ ಸತ್ಕರ್ಮವೆಸಗಲು ಸಹಾಯ ಮಾಡುತ್ತಾನೆ. ಈತನ ಉದಾಹರಣೆಯು ಕಸ್ತೂರಿ ಮಾರುವವನಂತೆ. ಒಂದೋ ಅವನು ಅದನ್ನು ನಿನಗೆ ಕೊಡುವನು ಅಥವಾ ನೀನು ಅದನ್ನು ಅವನಿಂದ ಖರೀದಿಸಬಹುದು. ಅಥವಾ ನಿನಗೆ ಅವನಿಂದ ಉತ್ತಮ ಸುವಾಸನೆಯನ್ನು ಅನುಭವಿಸಬಹುದು.
ಎರಡನೆಯವನು: ಕೆಟ್ಟ ಒಡನಾಡಿ ಅಥವಾ ಮಿತ್ರ. ಈತ ಅಲ್ಲಾಹನ ಮಾರ್ಗದಿಂದ ತಡೆಯುತ್ತಾನೆ ಮತ್ತು ಪಾಪಗಳನ್ನು ಮಾಡಲು ಸಹಾಯ ಮಾಡುತ್ತಾನೆ. ನೀನು ಅವನಲ್ಲಿ ಕೆಟ್ಟ ಕೃತ್ಯಗಳನ್ನು ಕಾಣುವೆ, ಮತ್ತು ಅವನಂತಹವರ ಸಹವಾಸ ಮಾಡಿದ್ದಕ್ಕಾಗಿ ಖಂಡನೆಗೆ ಒಳಗಾಗುವೆ. ಆತನ ಉದಾಹರಣೆಯು ಬೆಂಕಿಯನ್ನು ಊದುವ ಕಮ್ಮಾರನಂತೆ. ಒಂದೋ ಆತ ತನ್ನ ಹಾರುವ ಕಿಡಿಗಳಿಂದ ನಿನ್ನ ಬಟ್ಟೆಗಳನ್ನು ಸುಟ್ಟು ಹಾಕಬಹುದು. ಅಥವಾ ನಿನಗೆ ಅವನ ಸಹವಾಸದಿಂದ ಕೆಟ್ಟ ವಾಸನೆಯನ್ನು ಅನುಭವಿಸಬೇಕಾಗಬಹುದು.
Hadeeth benefits
ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಉದಾಹರಣೆಗಳನ್ನು ಹೇಳುವುದು ಬೋಧನೆಯ ಒಂದು ಶೈಲಿಯಾಗಿದೆ.
ಅನುಸರಣೆಯುಳ್ಳ ಮತ್ತು ನೀತಿವಂತ ಜನರ ಸಹವಾಸ ಮಾಡಲು ಮತ್ತು ಭ್ರಷ್ಟ ಹಾಗೂ ಕೆಟ್ಟ ನಡವಳಿಕೆಯ ಜನರಿಂದ ದೂರವಾಗಲು ಪ್ರೋತ್ಸಾಹಿಸಲಾಗಿದೆ.
Share
Use the QR code to easily share the message of Islam with others