- ಈ ಹದೀಸ್ ನ್ಯಾಯದ ಶ್ರೇಷ್ಠತೆಯನ್ನು ತಿಳಿಸುತ್ತದೆ ಮತ್ತು ನ್ಯಾಯಯುತವಾಗಿ ವರ್ತಿಸಲು ಪ್ರೇರೇಪಿಸುತ್ತದೆ.
- ನ್ಯಾಯವು ಎಲ್ಲಾ ವಿಷಯಗಳನ್ನು ಒಳಗೊಳ್ಳುತ್ತದೆ. ಆಡಳಿತಗಾರರು ಪ್ರಜೆಗಳ ವಿಷಯದಲ್ಲಿ ತೋರಿಸುವ ನ್ಯಾಯದಿಂದ ತೊಡಗಿ ಪತ್ನಿ-ಮಕ್ಕಳ ಬಗ್ಗೆ ತೋರಿಸುವ ನ್ಯಾಯವೂ ಇದರಲ್ಲಿ ಒಳಪಡುತ್ತದೆ.
- ಪುನರುತ್ಥಾನ ದಿನದಂದು ನ್ಯಾಯವಂತರಿಗೆ ದೊರಕುವ ಉನ್ನತ ಸ್ಥಾನಮಾನವನ್ನು ಈ ಹದೀಸ್ ವಿವರಿಸುತ್ತದೆ.
- ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಗಳಿಗೆ ಸಿಗುವ ಸ್ಥಾನಮಾನಗಳು ಅವರ ಕರ್ಮಗಳಿಗೆ ಅನುಗುಣವಾಗಿ ಹೆಚ್ಚು ಕಡಿಮೆಯಾಗಿರುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
- ಜನರಿಗೆ ಒಳಿತು ಮಾಡಲು ಪ್ರಚೋದನೆ ಸಿಗುವುದಕ್ಕಾಗಿ ಪ್ರಚೋದನಾತ್ಮಕವಾಗಿ ಬೋಧನೆ ಮಾಡುವುದು ಧರ್ಮಪ್ರಚಾರದ ಒಂದು ಶೈಲಿಯೆಂದು ಈ ಹದೀಸ್ ತಿಳಿಸುತ್ತದೆ.