- ಸೃಷ್ಟಿಗಳ ಮೇಲೆ ಸರ್ವಶಕ್ತನಾದ ಅಲ್ಲಾಹನಿಗಿರುವ ಕರುಣೆ ಮತ್ತು ಸಹಾನುಭೂತಿಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
- ಧರ್ಮವು ನಿರ್ದೇಶಿಸಿದ ರೀತಿಯಲ್ಲೇ ಕೊಲ್ಲುವುದು ಅಥವಾ ಕೊಯ್ಯುವುದು ಉತ್ತಮ ವರ್ತನೆಯೆಂದು ಈ ಹದೀಸ್ ತಿಳಿಸುತ್ತದೆ.
- ಇಸ್ಲಾಂ ಧರ್ಮದ ಸಂಪೂರ್ಣತೆ ಮತ್ತು ಅದು ಎಲ್ಲಾ ಒಳಿತುಗಳನ್ನು ಒಳಗೊಂಡಿದೆಯೆಂದು ಈ ಹದೀಸ್ ತಿಳಿಸುತ್ತದೆ. ಪ್ರಾಣಿಗಳಿಗೆ ದಯೆ ಮತ್ತು ಸಹಾನುಭೂತಿ ತೋರುವುದು ಇದರಲ್ಲಿ ಒಳಪಡುತ್ತದೆ.
- (ಯುದ್ಧದಲ್ಲಿ ಅಥವಾ ಇತರ ನ್ಯಾಯಬದ್ಧ ಸಂದರ್ಭಗಳಲ್ಲಿ) ಮನುಷ್ಯನನ್ನು ಕೊಂದರೆ ಅಂಗಾಂಗಳನ್ನು ವಿರೂಪಗೊಳಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ.
- ಪ್ರಾಣಿಗಳಿಗೆ ನೋವಾಗುವ ರೀತಿಯಲ್ಲಿ ಕೊಯ್ಯುವ ಎಲ್ಲಾ ವಿಧಾನಗಳನ್ನೂ ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.