/ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ

ಸಅದ್ ಬಿನ್ ಹಿಶಾಮ್ ಬಿನ್ ಆಮಿರ್ – ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಹೋದಾಗ ಹೇಳಿದರು: "ಓ ಸತ್ಯವಿಶ್ವಾಸಿಗಳ ತಾಯಿಯವರೇ! ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಕೇಳಿದರು: "ನೀವು ಪವಿತ್ರ ಕುರ್‌ಆನ್ ಪಠಿಸುವುದಿಲ್ಲವೇ?" ನಾನು ಹೇಳಿದೆ: "ಪಠಿಸುತ್ತೇನೆ." ಅವರು ಹೇಳಿದರು: "ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ."
رواه مسلم في جملة حديثٍ طويلٍ

ವಿವರಣೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಲಾದಾಗ ಅವರು ಒಂದು ಸಮಗ್ರ ವಾಕ್ಯದ ಮೂಲಕ ಉತ್ತರಿಸಿದರು. ಅವರು ಪ್ರಶ್ನೆ ಕೇಳಿದವನ ಗಮನವನ್ನು ಎಲ್ಲಾ ರೀತಿಯ ಸಂಪೂರ್ಣತೆಯ ನಡವಳಿಕೆಗಳನ್ನು ಒಳಗೊಂಡಿರುವ ಪವಿತ್ರ ಕುರ್‌ಆನ್‌ನ ಕಡೆಗೆ ತಿರುಗಿಸಿ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಿತ್ರ ಕುರ್‌ಆನನ್ನು ತಮ್ಮ ನಡವಳಿಕೆಯಾಗಿ ಮಾಡಿಕೊಂಡಿದ್ದಾರೆ; ಅದು ಆಜ್ಞಾಪಿಸುವುದನ್ನು ಅವರು ನಿರ್ವಹಿಸುತ್ತಾರೆ ಮತ್ತು ಅದು ವಿರೋಧಿಸುವುದರಿಂದ ಅವರು ದೂರ ಸರಿಯುತ್ತಾರೆ. ಪವಿತ್ರ ಕುರ್‌ಆನ್‌ನಲ್ಲಿರುವ ಪ್ರಕಾರ ಕಾರ್ಯವೆಸಗುವುದು, ಅದು ನಿಲ್ಲಲು ಹೇಳಿದಲ್ಲಿ ನಿಲ್ಲುವುದು, ಅದು ತೋರಿಸಿದ ಶಿಷ್ಟಾಚಾರಗಳನ್ನು ಪಾಲಿಸುವುದು ಮತ್ತು ಅದರಲ್ಲಿರುವ ಉದಾಹರಣೆಗಳು ಮತ್ತು ಕಥೆಗಳಿಂದ ನೀತಿಪಾಠವನ್ನು ಕಲಿತುಕೊಳ್ಳುವುದು ಅವರ ನಡವಳಿಕೆಯಾಗಿದೆ.

Hadeeth benefits

  1. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಿತ್ರ ಕುರ್‌ಆನನ್ನು ತಮ್ಮ ನಡವಳಿಕೆಯಾಗಿ ಸ್ವೀಕರಿಸಿಕೊಂಡಂತೆ ನಾವು ಕೂಡ ಅವರನ್ನು ಅನುಕರಿಸಬೇಕೆಂದು ಈ ಹದೀಸ್ ಪ್ರೋತ್ಸಾಹಿಸುತ್ತದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯನ್ನು ಈ ಹದೀಸ್ ಪ್ರಶಂಸಿಸುತ್ತದೆ ಮತ್ತು ಅವರ ನಡವಳಿಕೆಯು ದೇವಸಂದೇಶದ ಮೂಲದಿಂದಾಗಿತ್ತು ಎಂದು ಹೇಳುತ್ತದೆ.
  3. ಎಲ್ಲಾ ರೀತಿಯ ಉದಾತ್ತ ನಡವಳಿಕೆಗಳಿಗೆ ಪವಿತ್ರ ಕುರ್‌ಆನ್ ಮೂಲವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
  4. ಆಜ್ಞೆಗಳನ್ನು ಪಾಲಿಸುವುದು ಮತ್ತು ವಿರೋಧಗಳಿಂದ ದೂರವಿರುವುದರ ಮೂಲಕ ಇಸ್ಲಾಮಿನಲ್ಲಿ ನಡವಳಿಕೆಯು ಸಂಪೂರ್ಣ ಧರ್ಮವನ್ನು ಒಳಗೊಳ್ಳುತ್ತದೆ.