- ಮನೆಗಳನ್ನು ಆರಾಧನಾಮುಕ್ತಗೊಳಿಸುವುದನ್ನು ಅವರು ವಿರೋಧಿಸಿದ್ದಾರೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿ ಸಂದರ್ಶನಕ್ಕಾಗಿ ಯಾತ್ರೆ ಮಾಡುವುದನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ. ಏಕೆಂದರೆ, ತಮ್ಮ ಮೇಲೆ ಸ್ವಲಾತ್ ಹೇಳಲು ಆದೇಶಿಸಿದಾಗ, ಅದು ತನಗೆ ತಲುಪುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಮಸೀದಿಯನ್ನು ಸಂದರ್ಶಿಸಲು ಮತ್ತು ಅಲ್ಲಿ ನಮಾಝ್ ನಿರ್ವಹಿಸಲು ಮಾತ್ರ ಯಾತ್ರೆ ಮಾಡಬಹುದು.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯನ್ನು ಉತ್ಸವ ಸ್ಥಳವನ್ನಾಗಿ ಮಾಡುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ. ಅಂದರೆ ಅವರ ಸಮಾಧಿಯನ್ನು ನಿರ್ದಿಷ್ಟ ವಿಧಾನದಲ್ಲಿ ಮತ್ತು ನಿರ್ದಿಷ್ಟ ಸಮಯದಲ್ಲಿ ನಿರಂತರ ಸಂದರ್ಶಿಸುವುದು. ಈ ವಿಧಿಯು ಎಲ್ಲಾ ಸಮಾಧಿಗಳಿಗೂ ಅನ್ವಯವಾಗುತ್ತದೆ.
- ಸರ್ವಶಕ್ತನಾದ ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡಿದ ಗೌರವವನ್ನು ಈ ಹದೀಸಿನಲ್ಲಿ ಕಾಣಬಹುದು. ಎಲ್ಲಾ ಸ್ಥಳ-ಕಾಲಗಳಲ್ಲೂ ಅವರ ಮೇಲೆ ಸ್ವಲಾತ್ ಹೇಳುವುದನ್ನು ಧಾರ್ಮಿಕ ನಿಯಮವನ್ನಾಗಿ ಮಾಡುವ ಮೂಲಕ ಅಲ್ಲಾಹು ಅವರನ್ನು ಗೌರವಿಸಿದ್ದಾನೆ.
- ಸಮಾಧಿಗಳ ಬಳಿ ನಮಾಝ್ ಮಾಡಬಾರದೆಂಬ ವಿರೋಧವು ಅವರ ಸಂಗಡಿಗರ ನಡುವೆಯೂ ಜನಜನಿತವಾಗಿತ್ತು ಎಂದು ಈ ಹದೀಸಿನಿಂದ ತಿಳಿಯುತ್ತದೆ. ಈ ಕಾರಣದಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯಲ್ಲಿ ನಮಾಝ್ ನಿರ್ವಹಿಸದಿದ್ದರೆ ಅದು ಸಮಾಧಿಯಾಗುತ್ತದೆ ಎಂದು ಹೇಳಿದರು. ಏಕೆಂದರೆ ಸಮಾಧಿಗಳ ಬಳಿ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.