- ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳ ವಿಷಯದಲ್ಲಿ ಧರ್ಮವು ನಿಶ್ಚಯಿಸಿದ ಎಲ್ಲೆಯನ್ನು ಮೀರಿ ವರ್ತಿಸುವುದು, ಅಲ್ಲಾಹನ ಹೊರತು ಅವುಗಳನ್ನು ಆರಾಧಿಸಲು ಕಾರಣವಾಗುತ್ತದೆ ಎಂದು ಈ ಹದೀಸಿನಲ್ಲಿ ಎಚ್ಚರಿಸಲಾಗಿದೆ. ಆದ್ದರಿಂದ, ಬಹುದೇವಾರಾಧನೆಗೆ ಕಾರಣವಾಗುವ ಇಂತಹ ಮಾರ್ಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
- ಸಮಾಧಿ ಯಾರದ್ದೇ ಆಗಿದ್ದರೂ, ಅವರು ಅಲ್ಲಾಹನಿಗೆ ಎಷ್ಟೇ ನಿಕಟರಾಗಿದ್ದರೂ, ಅವರ ಸಮಾಧಿಗಳನ್ನು ಗೌರವಿಸುವುದಕ್ಕಾಗಿ ಅಥವಾ ಅಲ್ಲಿ ಆರಾಧನೆ ಸಲ್ಲಿಸುವುದಕ್ಕಾಗಿ ಯಾತ್ರೆ ಮಾಡುವುದನ್ನು ಇಸ್ಲಾಂ ಧರ್ಮವು ಅನುಮತಿಸುವುದಿಲ್ಲ.
- ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದನ್ನು ಈ ಹದೀಸ್‌ನಲ್ಲಿ ನಿಷೇಧಿಸಲಾಗಿದೆ.
- ಸಮಾಧಿಯ ಬಳಿ ನಮಾಝ್ ಮಾಡುವುದನ್ನೂ ಈ ಹದೀಸ್‌ನಲ್ಲಿ ನಿಷೇಧಿಸಲಾಗಿದೆ. ಅಲ್ಲಿ ಮಸೀದಿ ಇದ್ದರೂ ಇಲ್ಲದಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಆದರೆ ಜನಾಝ ನಮಾಝ್ (ಅಂತ್ಯಕ್ರಿಯೆಯ ನಮಾಝ್) ನಿರ್ವಹಿಸಲ್ಪಡದ ವ್ಯಕ್ತಿಗಾಗಿ ಆತನ ಸಮಾಧಿಯ ಬಳಿ ಜನಾಝ ನಮಾಝ್ ನಿರ್ವಹಿಸಬಹುದು.