- ಅಲ್ಲಾಹನಿಗೆ ನಮಾಝ್ ಮಾಡುವುದಕ್ಕಾಗಿ ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ವಿರೋಧಿಸಲಾಗಿದೆ. ಏಕೆಂದರೆ ಅದು ಶಿರ್ಕ್ (ದೇವಸಹಭಾಗಿತ್ವ) ಗೆ ಕಾರಣವಾಗುತ್ತದೆ.
- ತೌಹೀದಿನ (ಏಕದೇವತ್ವ) ಬಗ್ಗೆ ಪ್ರವಾದಿಯರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದ ತೀವ್ರ ಕಾಳಜಿಯನ್ನು ತಿಳಿಸಲಾಗಿದೆ. ಅವರು ಅದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು ಮತ್ತು ಸಮಾಧಿಗಳನ್ನು ಮಿತಿಮೀರಿ ಗೌರವಿಸುವುದರ ಬಗ್ಗೆ ಅತಿಯಾಗಿ ಭಯಪಡುತ್ತಿದ್ದರು. ಏಕೆಂದರೆ ಅದು ಶಿರ್ಕ್ (ದೇವಸಹಭಾಗಿತ್ವ) ಗೆ ಕಾರಣವಾಗುತ್ತದೆ.
- ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಹಾಗೂ ಅವರ ಕೃತ್ಯಗಳನ್ನು ಅನುಕರಿಸಿ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವವರನ್ನು ಶಪಿಸಲು ಅನುಮತಿಯಿದೆ.
- ಸಮಾಧಿಗಳ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು ಯಹೂದಿಗಳ ಮತ್ತು ಕ್ರೈಸ್ತರ ಸಂಪ್ರದಾಯವಾಗಿದೆ. ಅದನ್ನು ಅನುಕರಿಸುವುದನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ.
- ಮಸೀದಿಗಳನ್ನು ನಿರ್ಮಿಸಲಾಗಿರದಿದ್ದರೂ ಸಹ ಸಮಾಧಿಗಳ ಬಳಿ ಅಥವಾ ಅವುಗಳಿಗೆ ಮುಖ ಮಾಡಿ ನಮಾಝ್ ನಿರ್ವಹಿಸುವುದು ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡುವುದರಲ್ಲಿ ಒಳಪಡುತ್ತದೆ.