/ ತೀರ್ಪಿಗಾಗಿ ಲಂಚ ನೀಡುವವರನ್ನು ಮತ್ತು ಲಂಚ ಪಡೆಯುವವರನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ...

ತೀರ್ಪಿಗಾಗಿ ಲಂಚ ನೀಡುವವರನ್ನು ಮತ್ತು ಲಂಚ ಪಡೆಯುವವರನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ತೀರ್ಪಿಗಾಗಿ ಲಂಚ ನೀಡುವವರನ್ನು ಮತ್ತು ಲಂಚ ಪಡೆಯುವವರನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ."
رواه الترمذي وأحمد

ವಿವರಣೆ

ಲಂಚ ನೀಡುವವರು ಮತ್ತು ಲಂಚ ಪಡೆಯುವವರು ಅಲ್ಲಾಹನ ದಯೆಯಿಂದ ದೂರವಾಗಲಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದ್ದಾರೆ. ತಮ್ಮ ಅನೈತಿಕ ಉದ್ದೇಶವನ್ನು ನೆರವೇರಿಸುವುದಕ್ಕಾಗಿ ತೀರ್ಪು ತಮ್ಮ ಪರವಾಗಿ ಬರುವಂತೆ ಮಾಡಲು ನ್ಯಾಯಾಧೀಶರಿಗೆ ಲಂಚ ಕೊಡುವುದು ಇದರಲ್ಲಿ ಪ್ರಮುಖವಾಗಿದೆ.

Hadeeth benefits

  1. ಲಂಚ ನೀಡುವುದು, ಪಡೆಯುವುದು, ಅದಕ್ಕಾಗಿ ಮಧ್ಯಸ್ತಿಕೆ ವಹಿಸುವುದು ಮತ್ತು ಅದಕ್ಕಾಗಿ ಸಹಾಯ ಮಾಡುವುದು ನಿಷಿದ್ಧವಾಗಿದೆ. ಏಕೆಂದರೆ ಇದು ಅನ್ಯಾಯಕ್ಕಾಗಿ ಸಹಕರಿಸುವುದಾಗಿದೆ.
  2. ಲಂಚವು ಮಹಾಪಾಪಗಳಲ್ಲಿ ಒಳಪಡುತ್ತದೆ. ಏಕೆಂದರೆ, ಲಂಚ ಪಡೆಯುವವರನ್ನು ಮತ್ತು ಕೊಡುವವರನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ.
  3. ನ್ಯಾಯಾಲಯಕ್ಕೆ ಮತ್ತು ತೀರ್ಪಿಗೆ ಸಂಬಂಧಿಸಿ ಲಂಚ ನೀಡುವುದು ಮಹಾ ಅಪರಾಧ ಮತ್ತು ಕಠೋರ ಪಾಪವಾಗಿದೆ. ಏಕೆಂದರೆ ಅದರಿಂದ ಅಕ್ರಮ ಮತ್ತು ಅಲ್ಲಾಹನ ಕಾನೂನಿಗೆ ವಿರುದ್ಧವಾಗಿ ತೀರ್ಪು ನೀಡುವುದು ಉಂಟಾಗುತ್ತದೆ.