/ ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು...

ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು...

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು."

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಬುದ್ಧಿಯ ಸ್ತಿಮಿತವನ್ನು ತಪ್ಪಿಸುವ ಎಲ್ಲವೂ ಮಾದಕ ಪದಾರ್ಥವಾದ ಮದ್ಯದಲ್ಲಿ ಸೇರುತ್ತವೆ. ಅವು ಪಾನೀಯಗಳು, ತಿನಿಸುಗಳು, ಮೂಗಿಗೆ ಎಳೆಯುವಂತಹವುಗಳು ಅಥವಾ ಇತರ ಯಾವುದೇ ಆಗಿದ್ದರೂ ಸಹ. ಅಮಲು ಬರಿಸುವ ಮತ್ತು ಬುದ್ಧಿಯ ಸ್ತಿಮಿತವನ್ನು ತಪ್ಪಿಸುವ ಎಲ್ಲವನ್ನೂ ಅಲ್ಲಾಹು ನಿಷೇಧಿಸಿದ್ದಾನೆ ಮತ್ತು ತಡೆದಿದ್ದಾನೆ. ಅವು ಕಡಿಮೆ ಪ್ರಮಾಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಸಹ. ಈ ಮಾದಕ ದ್ರವ್ಯಗಳ ಯಾವುದೇ ಒಂದು ವಿಧವನ್ನು ಯಾರು ಸೇವಿಸುತ್ತಾರೋ, ಮತ್ತು ಸಾವಿನ ತನಕ ಪಶ್ಚಾತ್ತಾಪಪಡದೆ ಅದನ್ನು ಸೇವಿಸುತ್ತಲೇ ಇರುತ್ತಾರೋ, ಅವರು ಅಲ್ಲಾಹನ ಶಿಕ್ಷೆಗೆ ಅರ್ಹರಾಗುತ್ತಾರೆ, ಅಂದರೆ ಸ್ವರ್ಗದಲ್ಲಿ ಅವರಿಗೆ ಮದ್ಯ ಸೇವನೆಯನ್ನು ತಡೆಹಿಡಿಯಲಾಗುತ್ತದೆ.

Hadeeth benefits

  1. ಮದ್ಯದಲ್ಲಿರುವ ಅಮಲಿನ ಕಾರಣ ಅದನ್ನು ನಿಷೇಧಿಸಲಾಗಿದೆ. ಆದ್ದರಿಂದ ಅಮಲು ಬರಿಸುವ ವಿಧಗಳೆಲ್ಲವೂ ನಿಷಿದ್ಧವಾಗಿವೆ.
  2. ಸರ್ವಶಕ್ತನಾದ ಅಲ್ಲಾಹು ಮದ್ಯವನ್ನು ನಿಷೇಧಿಸಿದ್ದಾನೆ. ಏಕೆಂದರೆ, ಅದು ಅನೇಕ ಹಾನಿಗಳನ್ನು ಮತ್ತು ಮಹಾ ಕೆಡುಕುಗಳನ್ನು ಒಳಗೊಂಡಿದೆ.
  3. ಸ್ವರ್ಗದಲ್ಲಿ ಮದ್ಯವನ್ನು ಸೇವಿಸುವುದು ಅಲ್ಲಿನ ಆನಂದವನ್ನು ಪರಿಪೂರ್ಣಗೊಳಿಸುತ್ತದೆ ಮತ್ತು ಸುಖವನ್ನು ಪೂರ್ಣಗೊಳಿಸುತ್ತದೆ.
  4. ಇಹಲೋಕದಲ್ಲಿ ಯಾರು ಮದ್ಯ ಸೇವನೆಯನ್ನು ನಿಲ್ಲಿಸುವುದಿಲ್ಲವೋ ಸ್ವರ್ಗದಲ್ಲಿ ಅವನಿಗೆ ಅಲ್ಲಾಹು ಅದನ್ನು ನಿಷೇಧಿಸುತ್ತಾನೆ. ಪ್ರತಿಫಲವು ಕರ್ಮಕ್ಕೆ ತಕ್ಕಂತೆ ಇರುತ್ತದೆ.
  5. ಸಾವಿಗೆ ಮೊದಲು ಪಾಪಗಳ ಬಗ್ಗೆ ಪಶ್ಚಾತ್ತಾಪಪಡಲು ಆತುರ ತೋರುವುದನ್ನು ಪ್ರೋತ್ಸಾಹಿಸಲಾಗಿದೆ.