- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯನ್ನು ಈ ಹದೀಸ್ ವಿವರಿಸುತ್ತದೆ. ಅವರು ವಿಷಯಗಳನ್ನು ಮನದಟ್ಟು ಮಾಡಿಸಲು ಪ್ರಶ್ನೆಗಳನ್ನು ಕೇಳುತ್ತಿದ್ದರು.
- ಸಂಗಡಿಗರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರುತ್ತಿದ್ದ ಉತ್ತಮ ಗುಣವನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಅವರು ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ, "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು" ಎಂದು ಹೇಳುತ್ತಿದ್ದರು.
- ತನಗೆ ತಿಳಿದಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಕೇಳಲಾದರೆ, "ಅಲ್ಲಾಹು ಹೆಚ್ಚು ತಿಳಿದವನು" ಎಂದು ಹೇಳಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಸಮಾಜದ ಜನರ ಹಕ್ಕುಗಳನ್ನು ಮತ್ತು ಸಹೋದರತೆಯನ್ನು ಸಂರಕ್ಷಿಸುವ ಮೂಲಕ ಇಸ್ಲಾಂ ಧರ್ಮವು ಸಮಾಜವನ್ನು ರಕ್ಷಿಸುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
- ಜನರ ಹಿತದೃಷ್ಟಿಯಿಂದ ಕೆಲವು ಪರದೂಷಣೆಗಳನ್ನು ನಿಷೇಧದಿಂದ ಹೊರತುಪಡಿಸಲಾಗಿದೆ: ಉದಾಹರಣೆಗೆ, ಅನ್ಯಾಯವನ್ನು ತಡೆಗಟ್ಟುವುದಕ್ಕಾಗಿ. ಅಂದರೆ ಒಬ್ಬ ವ್ಯಕ್ತಿ ತನಗಾದ ಅನ್ಯಾಯವನ್ನು ಅದನ್ನು ಸರಿಪಡಿಸುವ ಅಧಿಕಾರವಿರುವ ವ್ಯಕ್ತಿಯೊಡನೆ ಹೇಳುವುದು. ಅಂದರೆ, ಇಂತಿಂತಹ ವ್ಯಕ್ತಿ ತನಗೆ ಅನ್ಯಾಯ ಮಾಡಿದ್ದಾನೆ ಅಥವಾ ತನ್ನೊಂದಿಗೆ ಇಂತಿಂತಹ ಕೃತ್ಯಗಳನ್ನು ಮಾಡಿದ್ದಾನೆಂದು ಹೇಳುವುದು. ಅದೇ ರೀತಿ, ಒಬ್ಬರನ್ನು ಮದುವೆಯಾಗಲು ಬಯಸುವವರು, ಅಥವಾ ವ್ಯಾಪಾರದಲ್ಲಿ ಪಾಲುದಾರನನ್ನಾಗಿ ಮಾಡಲು ಬಯಸುವವರು, ಅಥವಾ ಒಬ್ಬರ ಮನೆಯ ಬಳಿ ಮನೆ ಕಟ್ಟಲು ಅಥವಾ ಖರೀದಿಸಲು ಬಯಸುವವರು ಅವರ ಬಗ್ಗೆ ಅಭಿಪ್ರಾಯ ಕೇಳಿದಾಗ ಪ್ರಾಮಾಣಿಕವಾಗಿ ಅವರ ಕೆಟ್ಟ ಗುಣಗಳನ್ನು ಹೇಳುವುದು ಪರದೂಷಣೆಯಲ್ಲ.