- ಧಾರ್ಮಿಕ ಪರಿಗಣನೆಯಲ್ಲಿ ಕುಟುಂಬ ಸಂಬಂಧ ಜೋಡಿಸುವುದು ಎಂದರೆ ಸಂಬಂಧ ಕಡಿದವರೊಡನೆ ಸಂಬಂಧ ಜೋಡಿಸುವುದು, ಸಂಬಂಧಿಕರು ಅನ್ಯಾಯವೆಸಗಿದರೆ ಅವರಿಗೆ ಕ್ಷಮಿಸುವುದು ಮತ್ತು ಅವರು ನಿಮಗೆ ಏನೂ ಕೊಡದಿದ್ದರೂ ನೀವು ಅವರಿಗೆ ಕೊಡುವುದು. ಇದರ ಹೊರತು ಅವರು ಒಳಿತು ಮಾಡಿದರೆ ಮಾತ್ರ ಒಳಿತು ಮಾಡುವುದು ಕುಟುಂಬ ಸಂಬಂಧ ಜೋಡಣೆಯಲ್ಲ.
- ಸಾಧ್ಯವಾಗುವ ಎಲ್ಲಾ ಒಳಿತುಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧವನ್ನು ಜೋಡಿಸಬಹುದು. ಉದಾಹರಣೆಗೆ, ಹಣ ನೀಡುವುದು, ಪ್ರಾರ್ಥಿಸುವುದು, ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು, ಹಾಗೆಯೇ ಅವರಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುವುದು ಇತ್ಯಾದಿ.