- ಕುಟುಂಬ ಸಂಬಂಧ ಎಂದರೆ, ತಂದೆ ಮತ್ತು ತಾಯಿಯ ಕಡೆಯ ಹತ್ತಿರದ ಸಂಬಂಧಿಕರು. ಸಂಬಂಧಗಳು ಹೆಚ್ಚು ಹತ್ತಿರವಾದಂತೆ ಸಂಬಂಧ ಜೋಡಣೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.
- ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ، ಒಳಿತು ಮತ್ತು ಸಹಾಯಗಳನ್ನು ಮಾಡುವ ಮೂಲಕ ಕುಟುಂಬ ಸಂಬಂಧ ಜೋಡಿಸುವವರ ಆಯುಷ್ಯ ಮತ್ತು ಜೀವನೋಪಾಯವನ್ನು ಅಲ್ಲಾಹು ಜೋಡಿಸುತ್ತಾನೆ.
- ಕುಟುಂಬ ಸಂಬಂಧ ಜೋಡಣೆಯು ಜೀವನೋಪಾಯದ ವಿಶಾಲತೆಗೆ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ. ಆಯುಷ್ಯ ಮತ್ತು ಜೀವನೋಪಾಯವು ನಿಗದಿತವಾಗಿದ್ದರೂ ಸಹ, ಕೆಲವೊಮ್ಮೆ ಜೀವನೋಪಾಯ ಮತ್ತು ಆಯುಷ್ಯದಲ್ಲಿ ಸಮೃದ್ಧಿಯುಂಟಾಗುತ್ತದೆ. ಇದರಿಂದ ಕೆಲವರು ತಮ್ಮ ಆಯುಷ್ಯದಲ್ಲಿ ಇತರರು ಮಾಡುವುದಕ್ಕಿಂತಲೂ ಹೆಚ್ಚು ಕರ್ಮಗಳನ್ನು ಮಾಡುತ್ತಾರೆ ಮತ್ತು ಅವರ ಕರ್ಮಗಳು ಇತರರಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಇದು ಜೀವನೋಪಾಯ ಮತ್ತು ಆಯುಷ್ಯದಲ್ಲಿರುವ ಅಕ್ಷರಶಃ ಏರಿಕೆಯಾಗಿದೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಹೆಚ್ಚು ಬಲ್ಲವನು ಅಲ್ಲಾಹು.