- ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳುವುದು ಮಹಾಪಾಪವಾಗಿದೆ.
- ಕುಟುಂಬ ಸಂಬಂಧವು ವಾಡಿಕೆಗೆ ಅನುಗುಣವಾಗಿದ್ದು, ಸ್ಥಳ, ಕಾಲ ಮತ್ತು ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.
- ಕುಟುಂಬ ಸಂಬಂಧಗಳ ಜೋಡಣೆಯು ಕುಟುಂಬಿಕರನ್ನು ಭೇಟಿಯಾಗುವುದು, ಅವರಿಗೆ ದಾನ ಮಾಡುವುದು, ಅವರಿಗೆ ಉಪಕಾರ ಮಾಡುವುದು, ಅವರು ಅನಾರೋಗ್ಯದಲ್ಲಿದ್ದರೆ ಸಂದರ್ಶಿಸುವುದು, ಅವರಿಗೆ ಒಳಿತನ್ನು ಬೋಧಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಮುಂತಾದವುಗಳಿಂದ ಸಾಧ್ಯವಾಗುತ್ತದೆ.
- ಕಡಿಯುವ ಸಂಬಂಧಗಳು ಎಷ್ಟರಮಟ್ಟಿಗೆ ಹತ್ತಿರವಾಗಿರುತ್ತದೋ ಅಷ್ಟರಮಟ್ಟಿಗೆ ಪಾಪದ ತೀವ್ರತೆಯು ಹೆಚ್ಚಾಗುತ್ತದೆ.