/ (ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ...

(ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ."
رواه البخاري

ವಿವರಣೆ

ಮುಸಲ್ಮಾನರೊಂದಿಗೆ ಒಪ್ಪಂದದಲ್ಲಿರುವವರನ್ನು—ಅಂದರೆ ಭದ್ರತೆ ಮತ್ತು ಸುರಕ್ಷತೆಯನ್ನು ನೀಡುವ ವಾಗ್ದಾನದ ಮೂಲಕ ಮುಸ್ಲಿಂ ದೇಶಕ್ಕೆ ಬರುವ ಮುಸ್ಲಿಮೇತರರನ್ನು) ಯಾರಾದರೂ ಕೊಂದರೆ, ನಲ್ವತ್ತು ವರ್ಷಗಳ ದೂರದಿಂದ ಅನುಭವಿಸಬಹುದಾದ ಸ್ವರ್ಗದ ಪರಿಮಳವನ್ನು ಕೂಡ ಅವರು ಅನುಭವಿಸಲಾರರು ಎಂಬ ತೀವ್ರ ಮತ್ತು ಕಠೋರ ಎಚ್ಚರಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ.

Hadeeth benefits

  1. ಮುಸ್ಲಿಮರೊಂದಿಗೆ ಒಪ್ಪಂದದಲ್ಲಿರುವ ಮುಸ್ಲಿಮೇತರರು, ಮುಸ್ಲಿಂ ದೇಶದಲ್ಲಿ ವಾಸಿಸುವ ಮುಸ್ಲಿಮೇತರ ಪ್ರಜೆಗಳು ಮತ್ತು ಮುಸ್ಲಿಂ ದೇಶದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮೇತರರು—ಇವರನ್ನು ಕೊಲ್ಲುವುದು ನಿಷಿದ್ಧವಾಗಿದೆ. ಇವರನ್ನು ಕೊಲ್ಲುವುದು ಮಹಾಪಾಪವಾಗಿದೆ.
  2. ಮುಆಹಿದ್ (ಮುಸ್ಲಿಮರೊಂದಿಗೆ ಒಪ್ಪಂದದಲ್ಲಿರುವ ಮುಸ್ಲಿಮೇತರರು): ಮುಸಲ್ಮಾನರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ದೇಶದಲ್ಲಿ ವಾಸಿಸುವ ಮುಸ್ಲಿಮೇತರರು. ಇವರು ಮುಸಲ್ಮಾನರ ವಿರುದ್ಧ ಹೋರಾಡಬಾರದು ಮತ್ತು ಮುಸಲ್ಮಾನರು ಇವರ ವಿರುದ್ಧ ಹೋರಾಡಬಾರದು. ದಿಮ್ಮಿ (ಮುಸ್ಲಿಂ ದೇಶದಲ್ಲಿ ವಾಸಿಸುವ ಮುಸ್ಲಿಮೇತರ ಪ್ರಜೆಗಳು): ಕರ ಪಾವತಿ ಮಾಡಿ ಮುಸ್ಲಿಂ ದೇಶದಲ್ಲಿ ವಾಸಿಸುವ ಮುಸ್ಲಿಮೇತರ ಪ್ರಜೆಗಳು. ಮುಸ್ತಅ್‌ಮಿನ್ (ಮುಸ್ಲಿಂ ದೇಶದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮೇತರರು): ಅಭಯ ನೀಡುವ ಒಪ್ಪಂದದೊಂದಿಗೆ ತಾತ್ಕಾಲಿಕವಾಗಿ ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರು.
  3. ಮುಸ್ಲಿಮೇತರರೊಂದಿಗೆ ಮಾಡಿದ ಒಪ್ಪಂದಗಳನ್ನು ಮುರಿಯುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.