- ರಕ್ತಪಾತದ ಗಂಭೀರತೆಯನ್ನು ಒತ್ತಿಹೇಳಲಾಗಿದೆ. ಏಕೆಂದರೆ ಏನನ್ನೇ ಆದರೂ ಪ್ರಮುಖ ವಿಷಯದಿಂದಲೇ ಪ್ರಾರಂಭಿಸಲಾಗುತ್ತದೆ.
- ಪಾಪದಿಂದ ಉಂಟಾಗುವ ಹಾನಿಯ ಪ್ರಮಾಣವನ್ನು ಆಧರಿಸಿ ಪಾಪಗಳ ಗಂಭೀರತೆಯನ್ನು ನಿರ್ಧರಿಸಲಾಗುತ್ತದೆ. ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದು ಅತ್ಯಂತ ಗಂಭೀರ ಹಾನಿಗಳಲ್ಲಿ ಒಂದಾಗಿದೆ. ಸತ್ಯನಿಷೇಧ ಮತ್ತು ಶಿರ್ಕ್ (ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವುದು) ಹೊರತುಪಡಿಸಿದರೆ ಇದೇ ಅತಿದೊಡ್ಡ ಪಾಪವಾಗಿದೆ.