- ಸುಳ್ಳು ಪ್ರಮಾಣವು ಅತ್ಯಂತ ಅಪಾಯಕಾರಿ ಮತ್ತು ಮಹಾ ಅಪರಾಧವಾಗಿರುವುದರಿಂದ ಅದಕ್ಕೆ ಪ್ರಾಯಶ್ಚಿತ್ತವಿಲ್ಲ. ಅದಕ್ಕಿರುವುದು ಪಶ್ಚಾತ್ತಾಪ ಮಾತ್ರ.
- ಇಲ್ಲಿ ನಾಲ್ಕು ಮಹಾಪಾಪಗಳ ಬಗ್ಗೆ ಮಾತ್ರ ಉಲ್ಲೇಖಿಸಿದ್ದು ಆ ಪಾಪಗಳ ಭಯಾನಕತೆಯನ್ನು ವಿವರಿಸುವುದಕ್ಕಾಗಿದೆಯೇ ಹೊರತು ಅವುಗಳ ಸಂಖ್ಯೆಯನ್ನು ನಾಲ್ಕಕ್ಕೆ ಸೀಮಿತಗೊಳಿಸುವುದಕ್ಕಲ್ಲ.
- ಪಾಪಗಳಲ್ಲಿ ಮಹಾಪಾಪಗಳು ಮತ್ತು ಸಣ್ಣ ಪಾಪಗಳಿವೆ. ಮಹಾಪಾಪ ಎಂದರೆ ಇಹಲೋಕದಲ್ಲೇ ಶಿಕ್ಷೆಯನ್ನು ನಿಶ್ಚಯಿಸಲಾದ ಪಾಪಗಳು. ಉದಾಹರಣೆಗೆ, ಕಾನೂನಿನಲ್ಲಿ ನಿಗದಿಪಡಿಸಲಾದ ಶಿಕ್ಷೆಗಳಿರುವ, ಅಥವಾ ಶಾಪವಿದೆಯೆಂದು ಹೇಳಲಾದ ಇಹಲೋಕದಲ್ಲೇ ಶಿಕ್ಷೆ ನೀಡಲಾಗುವ ಪಾಪಗಳು. ಅಥವಾ ಪರಲೋಕದಲ್ಲಿ ನರಕ ಶಿಕ್ಷೆಯಿದೆಯೆಂದು ಎಚ್ಚರಿಕೆ ನೀಡಲಾದ ಪಾಪಗಳು. ಮಹಾಪಾಪಗಳಲ್ಲಿ ವಿಭಿನ್ನ ದರ್ಜೆಗಳಿವೆ. ನಿಷೇಧದಲ್ಲಿ ಕೆಲವು ಪಾಪಗಳು ಇತರ ಪಾಪಗಳಿಗಿಂತಲೂ ಕಠೋರವಾಗಿದೆ. ಮಹಾಪಾಪಗಳಿಗೆ ಹೊರತಾದ ಪಾಪಗಳೆಲ್ಲವೂ ಸಣ್ಣ ಪಾಪಗಳಾಗಿವೆ.