- ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು ಅತಿದೊಡ್ಡ ಪಾಪವಾಗಿದೆ. ಏಕೆಂದರೆ ಇದನ್ನು ಮಹಾಪಾಪಗಳ ಆರಂಭದಲ್ಲಿ ಮತ್ತು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಲ್ಲಾಹನ ಈ ವಚನವು ಇದನ್ನು ದೃಢೀಕರಿಸುತ್ತದೆ: "ತನ್ನೊಡನೆ ಸಹಭಾಗಿತ್ವ ಮಾಡುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ."
- ಮಾತಾಪಿತರ ಹಕ್ಕುಗಳನ್ನು ಅಲ್ಲಾಹನ ಹಕ್ಕುಗಳೊಂದಿಗೆ ಸೇರಿಸಿ ಹೇಳುವ ಮೂಲಕ ಅವರ ಹಕ್ಕುಗಳ ಮಹತ್ವವನ್ನು ತಿಳಿಸಲಾಗಿದೆ.
- ಪಾಪಗಳಲ್ಲಿ ಮಹಾಪಾಪಗಳು ಮತ್ತು ಸಣ್ಣ ಪಾಪಗಳಿವೆ. ಮಹಾಪಾಪ ಎಂದರೆ ಇಹಲೋಕದಲ್ಲೇ ಶಿಕ್ಷೆಯನ್ನು ನಿಶ್ಚಯಿಸಲಾದ ಪಾಪಗಳು. ಉದಾಹರಣೆಗೆ, ಕಾನೂನಿನಲ್ಲಿ ನಿಗದಿಪಡಿಸಲಾದ ಶಿಕ್ಷೆಗಳಿರುವ, ಅಥವಾ ಶಾಪವಿದೆಯೆಂದು ಹೇಳಲಾದ ಇಹಲೋಕದಲ್ಲೇ ಶಿಕ್ಷೆ ನೀಡಲಾಗುವ ಪಾಪಗಳು. ಅಥವಾ ಪರಲೋಕದಲ್ಲಿ ನರಕ ಶಿಕ್ಷೆಯಿದೆಯೆಂದು ಎಚ್ಚರಿಕೆ ನೀಡಲಾದ ಪಾಪಗಳು. ಮಹಾಪಾಪಗಳಲ್ಲಿ ವಿಭಿನ್ನ ದರ್ಜೆಗಳಿವೆ. ನಿಷೇಧದಲ್ಲಿ ಕೆಲವು ಪಾಪಗಳು ಇತರ ಪಾಪಗಳಿಗಿಂತಲೂ ಕಠೋರವಾಗಿದೆ. ಮಹಾಪಾಪಗಳಿಗೆ ಹೊರತಾದ ಪಾಪಗಳೆಲ್ಲವೂ ಸಣ್ಣ ಪಾಪಗಳಾಗಿವೆ.