/ “ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”...

“ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸಿಯು ಈರ್ಷ್ಯೆಪಡುವಂತೆ, ಕೋಪಿಸುವಂತೆ ಮತ್ತು ದ್ವೇಷಿಸುವಂತೆ ಅಲ್ಲಾಹು ಕೂಡ ಈರ್ಷ್ಯೆಪಡುತ್ತಾನೆ, ಕೋಪಿಸುತ್ತಾನೆ ಮತ್ತು ದ್ವೇಷಿಸುತ್ತಾನೆ. ಸತ್ಯವಿಶ್ವಾಸಿಗಳು ಅಲ್ಲಾಹು ನಿಷೇಧಿಸಿದ ವ್ಯಭಿಚಾರ, ಸಲಿಂಗರತಿ, ಕಳ್ಳತನ, ಮದ್ಯಪಾನ ಮುಂತಾದ ನೀಚಕೃತ್ಯಗಳನ್ನು ಮಾಡುವಾಗ ಅಲ್ಲಾಹನ ಈರ್ಷ್ಯೆಯು ಕೆರಳುತ್ತದೆ.

Hadeeth benefits

  1. ಅಲ್ಲಾಹು ನಿಷೇಧಿಸಿದ ಕೃತ್ಯಗಳಲ್ಲಿ ತೊಡಗುವುದು ಅಲ್ಲಾಹನ ಕೋಪ ಮತ್ತು ಶಿಕ್ಷೆಗೆ ಕಾರಣವಾಗುತ್ತದೆಯೆಂದು ಎಚ್ಚರಿಸಲಾಗಿದೆ.