- ಅಲ್ಲಾಹನ ಧರ್ಮವನ್ನು ಜನರಿಗೆ ತಲುಪಿಸಲು ಈ ಹದೀಸಿನಲ್ಲಿ ಉತ್ತೇಜಿಸಲಾಗಿದೆ. ಪ್ರತಿಯೊಬ್ಬರೂ ತಮಗೆ ಕಂಠಪಾಠವಿರುವ ಮತ್ತು ತಾವು ಸರಿಯಾಗಿ ಅರ್ಥ ಮಾಡಿಕೊಂಡಿರುವ ವಿಷಯಗಳನ್ನು, ಅವು ಎಷ್ಟೇ ಚಿಕ್ಕದಾಗಿದ್ದರೂ ಸರಿ, ಇತರರಿಗೆ ತಲುಪಿಸಲು ಮುತುವರ್ಜಿ ವಹಿಸಬೇಕು.
- ಧಾರ್ಮಿಕ ಜ್ಞಾನವನ್ನು ಪಡೆಯುವುದು ಕಡ್ಡಾಯವೆಂದು ಈ ಹದೀಸಿನಲ್ಲಿ ಸೂಚನೆಯಿದೆ. ಇದರಿಂದ ಅಲ್ಲಾಹನನ್ನು ಸರಿಯಾಗಿ ಆರಾಧಿಸಲು ಮತ್ತು ಅವನ ಧರ್ಮವನ್ನು ಸರಿಯಾದ ರೂಪದಲ್ಲಿ ತಲುಪಿಸಲು ಸಾಧ್ಯವಾಗುತ್ತದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಉಗ್ರ ಎಚ್ಚರಿಕೆಯಲ್ಲಿ ಒಳಪಡದಿರಲು ಯಾವುದೇ ಹದೀಸನ್ನು ಇತರರಿಗೆ ತಲುಪಿಸುವ ಮುನ್ನ, ಅಥವಾ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ.
- ಮಾತನಾಡುವಾಗ ಸತ್ಯ ಹೇಳಲು ಮತ್ತು ಹದೀಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಲು ಈ ಹದೀಸಿನಲ್ಲಿ ಒತ್ತಾಯಿಸಲಾಗಿದೆ. ಇದರಿಂದ ಸುಳ್ಳಿನಲ್ಲಿ ಒಳಪಡದಿರಲು ಸಾಧ್ಯವಾಗಬಹುದು. ವಿಶೇಷವಾಗಿ ಅಲ್ಲಾಹನ ಧರ್ಮದ ವಿಷಯದಲ್ಲಿ.