- ಅತ್ಯಾವಶ್ಯಕವಾದ ಪ್ರಮುಖ ವಿಷಯಗಳಲ್ಲಿ ತೊಡಗುವುದು, ಸದ್ಯಕ್ಕೆ ಅಗತ್ಯವಿಲ್ಲದ ವಿಷಯಗಳನ್ನು ಬಿಟ್ಟುಬಿಡುವುದು ಮತ್ತು ಇನ್ನೂ ಸಂಭವಿಸದಿರುವ ವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ತೊಡಗದಿರುವುದು ಕಡ್ಡಾಯವಾಗಿದೆ.
- ವಿಷಯಗಳನ್ನು ಕೆಲವೊಮ್ಮೆ ಕಗ್ಗಂಟಾಗಿಸುವ ಮತ್ತು ಹೆಚ್ಚಿನ ಭಿನ್ನಮತಗಳಿಗೆ ಹಾದಿಯೊದಗಿಸುವ ರೀತಿಯಲ್ಲಿ ಸಂಶಯಗಳಿಗೆ ಕಾರಣವಾಗುವ ಪ್ರಶ್ನೆಗಳನ್ನು ಕೇಳುವುದು ನಿಷಿದ್ಧವಾಗಿದೆ.
- ನಿಷೇಧಿಸಲಾದ ಎಲ್ಲವನ್ನೂ ತೊರೆಯಲು ಆಜ್ಞಾಪಿಸಲಾಗಿದೆ. ಏಕೆಂದರೆ, ಅವುಗಳನ್ನು ತೊರೆಯಲು ಯಾವುದೇ ಕಷ್ಟವಿಲ್ಲ. ಆದ್ದರಿಂದಲೇ ಇಲ್ಲಿ ನಿಷೇಧದ ಬಗ್ಗೆ ಅನಿರ್ಬಂಧಿತವಾಗಿ ಹೇಳಲಾಗಿದೆ.
- ಆಜ್ಞಾಪಿಸಲಾದ ವಿಷಯಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಲು ಆಜ್ಞಾಪಿಸಲಾಗಿದೆ. ಏಕೆಂದರೆ, ಕೆಲವೊಮ್ಮೆ ಅವುಗಳನ್ನು ನಿರ್ವಹಿಸಲು ಕಷ್ಟವಾಗಬಹುದು ಅಥವಾ ಸಾಧ್ಯವಾಗದೇ ಇರಬಹುದು. ಆದ್ದರಿಂದಲೇ ಅವುಗಳನ್ನು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಲು ಆಜ್ಞಾಪಿಸಲಾಗಿದೆ.
- ವಿಪರೀತ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ. ವಿದ್ವಾಂಸರು ಪ್ರಶ್ನೆ ಕೇಳುವುದನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ: ಮೊದಲನೆಯದು, ಧಾರ್ಮಿಕ ವಿಷಯಗಳಲ್ಲಿ ಅಗತ್ಯವಾದ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಪ್ರಶ್ನೆ ಕೇಳುವುದು. ಇದು ಅತ್ಯಾವಶ್ಯಕವಾಗಿದ್ದು ಸಹಾಬಿಗಳು ಕೇಳುವ ಪ್ರಶ್ನೆಗಳು ಈ ವಿಧದಲ್ಲಿ ಸೇರುತ್ತವೆ. ಎರಡನೆಯದು, ಮೊಂಡುತನ ಮತ್ತು ಸೋಗಲಾಡಿತನದಿಂದ ಪ್ರಶ್ನೆ ಕೇಳುವುದು. ಇದು ನಿಷೇಧಿಸಲಾದ ವಿಧವಾಗಿದೆ.
- ಹಿಂದಿನ ಸಮುದಾಯಗಳಲ್ಲಿ ಸಂಭವಿಸಿದಂತೆ, ಪ್ರವಾದಿಗೆ ವಿರುದ್ಧವಾಗಿ ಸಾಗುವುದರ ಬಗ್ಗೆ ಈ ಸಮುದಾಯಕ್ಕೆ ಎಚ್ಚರಿಕೆ ನೀಡಲಾಗಿದೆ.
- ಅನಗತ್ಯವಾಗಿ ವಿಪರೀತ ಪ್ರಶ್ನೆ ಕೇಳುವುದು ಮತ್ತು ಪ್ರವಾದಿಗಳಿಗೆ ವಿರುದ್ಧವಾಗಿ ಸಾಗುವುದು ನಾಶಕ್ಕೆ ಹೇತುವಾಗುತ್ತದೆ. ವಿಶೇಷವಾಗಿ, ಅಲ್ಲಾಹು ಮಾತ್ರ ತಿಳಿದಿರುವ ಅದೃಶ್ಯ ವಿಷಯಗಳು, ಪುನರುತ್ಥಾನ ದಿನದ ಅವಸ್ಥೆಗಳು ಮುಂತಾದ ತಿಳಿಯಲು ಸಾಧ್ಯವಿಲ್ಲದ ವಿಷಯಗಳ ಬಗ್ಗೆ ಪ್ರಶ್ನೆ ಕೇಳುವುದು.
- ಅತ್ಯಂತ ಜಟಿಲ ವಿಷಯಗಳ ಬಗ್ಗೆ ಪ್ರಶ್ನೆ ಕೇಳುವುದನ್ನು ನಿಷೇಧಿಸಲಾಗಿದೆ. ಔಝಾಈ ಹೇಳಿದರು: ಅಲ್ಲಾಹು ತನ್ನ ಒಬ್ಬ ದಾಸನನ್ನು ಜ್ಞಾನದ ಸಮೃದ್ಧಿಯಿಂದ ವಂಚಿತಗೊಳಿಸಲು ಬಯಸಿದರೆ, ಅವನ ನಾಲಗೆಯಲ್ಲಿ ಕುತರ್ಕಗಳನ್ನು ಹಾಕಿಬಿಡುತ್ತಾನೆ. ನಾನು ಕಂಡಂತೆ ಅಂತಹವರು ಅತಿಕಡಿಮೆ ಜ್ಞಾನವಿರುವವರಾಗಿದ್ದಾರೆ. ಇಬ್ನ್ ವಹಬ್ ಹೇಳಿದರು: ಮಾಲಿಕ್ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಜ್ಞಾನದ ವಿಷಯದಲ್ಲಿರುವ ತರ್ಕವು ಮನುಷ್ಯನ ಹೃದಯದಿಂದ ಜ್ಞಾನದ ಬೆಳಕನ್ನು ನಂದಿಸಿ ಬಿಡುತ್ತದೆ.